1. ಉದ್ಯಮಶೀಲತೆ ಮತ್ತು ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುವುದು.
2. ಯುವಕರಿಗೆ ಉದ್ಯಮ ಅವಕಾಶಗಳನ್ನು ಸೃಷ್ಟಿಸುವುದು.
3. ಕೌಶಲ್ಯಾಭಿವೃದ್ಧಿ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು.
4. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSME) ಬೆಂಬಲ ನೀಡುವುದು.
5. ಹೊಸ ಉದ್ಯಮ ಆರಂಭಿಸುವ ವಿಧಾನಗಳನ್ನು ತಿಳಿಸಿಕೊಡುವುದು.
6. MSME ನೋಂದಣಿ ಸರ್ಕಾರದ ಅನುದಾನ ಮತ್ತು ಸಬ್ಸಿಡಿ ಯೋಜನೆಗಳ ಮಾಹಿತಿ ನೀಡುವುದು.
7. ಹಣಕಾಸು ನಿರ್ವಹಣೆ ಮಾರುಕಟ್ಟೆ ಸಂಪರ್ಕ ರಫ್ತು ಅವಕಾಶಗಳ ಮಾಹಿತಿ ನೀಡುವುದು.
8. ಕಂಪ್ಯೂಟರ್ ಮತ್ತು ಐಟಿ ಕೌಶಲ್ಯಗಳು ಡಿಜಿಟಲ್ ಮಾರ್ಕೆಟಿಂಗ್ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಕೌಶಲ್ಯಗಳ ಜ್ಞಾನ ನೀಡುವುದು.
9. ಉದ್ಯಮಶೀಲತೆ ತರಬೇತಿ ನೀಡಿ ಹೊಸ ಉದ್ಯಮಿಗಳನ್ನು ಬೆಳೆಸಲು ವ್ಯವಹಾರ ಯೋಜನೆ ತಯಾರಿ ಮಾರುಕಟ್ಟೆ ಅಧ್ಯಯನ ಹಣಕಾಸು ಸಂಗ್ರಹಣೆ ಹೂಡಿಕೆದಾರರ ಸಂಪರ್ಕ ಮುಂತಾದ ಸೇವೆಗಳನ್ನು ಒದಗಿಸುವುದು.
10. ಮಹಿಳಾ ಸ್ವಸಹಾಯ ಗುಂಪುಗಳ ಬಲವರ್ಧನೆ ಕೌಶಲ್ಯ ತರಬೇತಿ ಹಣಕಾಸು ಸಾಕ್ಷರತೆ ನೀಡುವುದರ ಮೂಲಕ ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವುದು.
11. ಗ್ರಾಮೀಣ ಉದ್ಯಮಶೀಲತೆಗಾಗಿ ಹೈನುಗಾರಿಕೆ ಕುರಿ ಮತ್ತು ಮೇಕೆ ಸಾಕಾಣಿಕೆ ಆಹಾರ ಸಂಸ್ಕರಣಾ ಘಟಕಗಳು ಕೃಷಿ ಆಧಾರಿತ ಕೈಗಾರಿಕೆಗಳು ಕರಕುಶಲ ಉದ್ಯಮಗಳ ಸ್ಥಾಪನೆಗಳಿಗೆ ಪ್ರೋತ್ಸಾಹಿಸುವುದು.
